Psalms 110

ಯೆಹೋವನಿಂದ ಆರಿಸಲ್ಪಟ್ಟ ಚೀಯೋನಿನ ಅರಸ

ದಾವೀದನ ಕೀರ್ತನೆ.

(ಕೀರ್ತ. 2; 21)

1ಯೆಹೋವನು ನನ್ನ ಒಡೆಯನಿಗೆ,
<<ನಾನು ನಿನ್ನ ವಿರೋಧಿಗಳನ್ನು ನಿನ್ನ ಪಾದಪೀಠವಾಗುವಂತೆ ಮಾಡುವ ತನಕ,
ನನ್ನ ಬಲಗಡೆಯಲ್ಲಿ ಕುಳಿತುಕೊಂಡಿರು>> ಎಂದು ನುಡಿದನು.

2

ಯೆಹೋವನು ನಿನ್ನ ರಾಜದಂಡದ ಆಳ್ವಿಕೆಯನ್ನು

ಚೀಯೋನಿನ ಹೊರಗೂ ಹಬ್ಬಿಸುವನು;
ನಿನ್ನ ವೈರಿಗಳ ಮಧ್ಯದಲ್ಲಿ ದೊರೆತನ ಮಾಡು.
3 ನೀನು ಸೈನ್ಯವನ್ನು ಕೂಡಿಸುವ ದಿನದಲ್ಲಿ,
ನಿನ್ನ ಪ್ರಜೆಗಳು ಸಂತೋಷದಿಂದ ತಾವಾಗಿಯೇ ಸೇರಿಕೊಳ್ಳುವರು.
ಪರಿಶುದ್ಧ ವಸ್ತ್ರಭೂಷಿತರಾದ ನಿನ್ನ ಯುವ ಸೈನಿಕರು,
ಉದಯಕಾಲದ ಇಬ್ಬನಿಯಂತಿರುವರು.

4

<<ನೀನು ಸದಾಕಾಲವೂ ಮೆಲ್ಕಿಜೆದೇಕನ ತರಹ ಯಾಜಕನಾಗಿರುವೆ>> ಎಂದು

ಯೆಹೋವನು ಆಣೆಯಿಟ್ಟು ನುಡಿದಿದ್ದಾನೆ;
ಪಶ್ಚಾತ್ತಾಪಡುವುದಿಲ್ಲ.

5

ನಿನ್ನ ಬಲಗಡೆಯಲ್ಲಿರುವ ಕರ್ತನು ತನ್ನ ಕೋಪದ ದಿನದಲ್ಲಿ

ರಾಜರನ್ನು ಖಂಡಿಸುವನು.
6 ಆತನು ಜನಾಂಗಗಳಲ್ಲಿ ನ್ಯಾಯಸ್ಥಾಪಿಸುವಾಗ,
ವಿಸ್ತಾರವಾದ ರಣರಂಗದಲ್ಲಿ ಶತ್ರುಗಳ ಶಿರಸ್ಸನ್ನು ಛೇದಿಸಿ,
ಹೆಣಗಳಿಂದ ಅದನ್ನು ತುಂಬಿಸುವನು.

7

ಒಡೆಯನು ದಾರಿಯಲ್ಲಿ ಹಳ್ಳದ ನೀರನ್ನು ಕುಡಿದು ತಲೆಯೆತ್ತುವನು.

Copyright information for KanULB